ಕ್ಯಾರಿ, ಹೆನ್ರಿ
1687-1743. ಆಂಗ್ಲಕವಿ ಮತ್ತು ಸಂಗೀತಗಾರ. ಜಾರ್ಜ್ ಸ್ಯಾವಿಲನ ಜಾರಜಪುತ್ರನೆಂದು ಭಾವಿಸಲಾಗಿದೆ. ಅನೇಕ ವಿಕಟಕವಿತೆ, ಹಾಸ್ಯಪ್ರಹಸನ ಮತ್ತು ಗೀತೆಗಳನ್ನು ರಚಿಸಿದ್ದಾನೆ. ಹಲವು ಗೀತೆಗಳಿಗೆ ತನ್ನದೇ ರಾಗರಚನೆಗಳನ್ನು ಅಳವಡಿಸಿದ್ದಾನೆ. ಈತನ ನಂಬಿ ಪಂಬಿ ಕವಿತೆ ಆಂಬ್ರೋಸ್ ಫಿಲಿಪ್ಪ್‍ನನ್ನು ಕುರಿತ ಅಣಕಗೀತೆಯಾದರೂ ಭಾಷಾದೃಷ್ಟಿಯಿಂದ ಉತ್ತಮವಾದುದು. ಈತನ ಸ್ಯಾಲಿ ಇನ್ ಅವರ್ ಆಲಿ ಎಂಬ ಗೀತೆ ಇಂಗ್ಲಿಷ್ ಸಾಹಿತ್ಯದಲ್ಲಿ ಬಹು ಪ್ರಸಿದ್ಧವೆನಿಸಿದ ಗೀತೆಗಳಲ್ಲೊಂದೆನಿಸಿದೆ.  ಗಾಡ್ ಸೇವ್ ದಿ ಕಿಂಗ್ ಗೀತೆಯೂ ಇವನದೇ ಎಂದು ಹೇಳಲಾಗಿದೆಯಾದರೂ ಅದಕ್ಕೆ ಸಾಕಷ್ಟು ಆಧಾರಗಳಿಲ್ಲ.			(ಎನ್.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ